Online Betting, Gambling Is Non-Bailable Offense: CM Bommai | Karnataka Assembly | Vijay Karnataka
ರಾಜ್ಯದಲ್ಲಿ ಜೂಜಾಟ ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು. ಆನ್ ಲೈನ್ ಹಾಗೂ ಇತರ ಜೂಜು ತಡೆಯುವ ನಿಟ್ಟಿನಲ್ಲಿ ಈ ವಿಧೇಯಕ ಮಹತ್ವ ಪಡೆದುಕೊಂಡಿದೆ. ವಿಧೇಯಕದ ಬಗ್ಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಗ್ಯಾಂಬ್ಲಿಂಗ್ ಗಳು ಬೇಲೇಬಲ್ ಅಪರಾಧಗಳಾಗಿವೆ. ರಿಕ್ರಿಯೇಷನ್ ಕ್ಲಬ್‌ಗಳ ಹೆಸರಿನಲ್ಲಿ ದೊಡ್ಡ ಪ್ರಮಾಣದ ಗ್ಯಾಂಬ್ಲಿಂಗ್ ನಡೀತಿದೆ. ರಾಜ್ಯದ ಆಂಧ್ರದ ಗಡಿ ಭಾಗದ ಒಂದು ರೀಕ್ರಿಯೇಷನ್ ಕ್ಲಬ್‌ನಲ್ಲಿ ಲಕ್ಷಾಂತರ ರೂಪಾಯಿ ಗ್ಯಾಂಬ್ಲಿಂಗ್ ಆಡ್ತಾರೆ. ಆನ್‌ಲೈನ್ ಬೆಟ್ಟಿಂಗ್ ವ್ಯವಸ್ಥಿತವಾಗಿ ನಡಿಯುತ್ತಿದೆ ಇದರಿಂದ ಹಲವು ಕುಟುಂಬಗಳು ಹಾಳಾಗಿವೆ ಎಂದರು.
ಐಪಿಎಲ್ ಸೇರಿದಂತೆ ವ್ಯವಸ್ಥಿತವಾಗಿ ಗುಂಪು ಸೇರಿ ಬೆಟ್ಟಿಂಗ್ ಮಾಡುತ್ತಾರೆ. ಐಪಿಎಲ್ ನಲ್ಲಿ ಕೋಟಿ ಗಟ್ಟಲೆ ಬೆಟ್ಟಿಂಗ್ ನಡೆಯುತ್ತೆ. ಕಾನೂನಿನ ಮೂಲಕ ನಿಯಂತ್ರಣ ತರಬೇಕಿದೆ. ಈಗ ಆನ್ ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್ ಜಾಮೀನು ರಹಿತ ಅಪರಾಧ ಎಂದು ಮಾಡಿದ್ದೀವಿ. ಇದೀಗ ಕಾಯ್ದೆ ಜಾರಿ ಬಳಿಕ ಅಧಿಕಾರಿಗಳನ್ನು ಎಷ್ಟು ಕೇಸ್ ಹಾಕಿದ್ದೀರಾ ಎಂದು ಕಾಲ ಕಾಲಕ್ಕೆ ಕೇಳ್ತೀವಿ. ಅಷ್ಟೇ ಅಲ್ಲದೆ, ಹ್ಯಾಕಿಂಗ್ ಸಹ ದೊಡ್ಡ ಸಮಸ್ಯೆ, ಹ್ಯಾಕರ್ಸ್ ಎಲ್ಲ ರಂಗಗಳಲ್ಲೂ ಇದ್ದಾರೆ. ಈ ಎಲ್ಲ ಅಪರಾಧ ಚಟುವಟಿಕೆಗಳಲ್ಲೂ ಅಪರಾಧಿಗಳಿಗೆ ಶಿಕ್ಷೆ ಆಗುವ ಹಾಗೆ ಮಾಡ್ತೇವೆ. ಸದುದ್ದೇಶದಿಂದ ಈ ಕಾನೂನು ತಂದಿದ್ದೇವೆ ಎಂದರು.
#CMBasavarajBommai #Gambling #KarnatakaAssembly
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka